13 December, 2010

ಕನಸ ಬಾಜಾರದ ತುದಿಯಲ್ಲಿ

ನೆರಳೇ ಇಲ್ಲದ ದಾರಿಯಲ್ಲಿ
ಬಿರುಮಧ್ಯಾಹ್ನ
ಕರಿಡಾಂಬರು ಆರಿಹೋಗುವ ಬಿಸಿಲಲ್ಲಿ
ಇಂಗಿಹೋದ ಕನಸು ನನ್ನದಾಗಿತ್ತು

ಮರುದಿನ ಅದೇ ದಾರಿಯಲ್ಲಿ
ಸತ್ತುಬಿದ್ದ ಹೆಣಗಳಲ್ಲಿ
ಕನಸಿನ ನೆರಳುಗಳಿರಬೇಕು
ಕಂಡನೆನಪಾಗಿ ಬಿಕ್ಕಳಿಸಿ
ಕಿಟಕಿಗಳಿಲ್ಲದ ಮನೆಯೊಳಗೆ
ಉಸಿರಿಲ್ಲದೆ ಅತ್ತಿದ್ದೆ

ನಿಲುವಿಲ್ಲದ ನೆಲೆಯಲ್ಲಿ
ಮುಗಿಯದ ಹಾಗೆ ಈಗೆಲ್ಲ
ಎಷ್ಟೊಂದಿವೆ
ಕನಸುಬಾರದ ಜನರಿಗೆ ಶೋಕಿಗೆ
ಬೇಕೆಂದರೆ ಮಾರಾಟಕ್ಕೂ ಸಿಗುತ್ತವೆ
ಹತ್ತುರೂಪಾಯಿ ಕೊಟ್ಟರೆ ತೋರಿಸಿಹೋಗುತ್ತಾರೆ
ಬಗೆಬಗೆಯ ಸಲಕರಣೆ ಹಿಡಿದು
ಕನಸ ನನಸು ಮಾಡಲೆಂದೇ ಕೂತವರಿದ್ದಾರೆ

ಕನಸ ಬಾಜಾರದ ತುದಿಯಲ್ಲಿ
ಸ್ಮಶಾನವೊಂದಿದೆ
ಮಾರಾಟವಾಗದೆ ಉಳಿದವಕ್ಕೆ
ಅಲ್ಲೆಲ್ಲ
ಸಮಾಧಿಯ ಧೂಳೊರೆಸಿ
ಬರೆದ ಸಾಲುಗಳನ್ನು ಓದುವಾಗೆಲ್ಲ
ಇಂಥ ಸಾಲುಗಳೇ ಇಲ್ಲದ
ನನ್ನ ಕನಸಿನ ನೆನಪಾಗುತ್ತದೆ


10 comments:

Dr.D.T.Krishna Murthy. said...

ಚಂದದ ಕವನ !

ವಾಣಿಶ್ರೀ ಭಟ್ said...

sakkattagide..
bareda chitra kooda...

ತೇಜಸ್ವಿನಿ ಹೆಗಡೆ said...

Good one.. especially last few lines...

ಶರಶ್ಚಂದ್ರ ಕಲ್ಮನೆ said...

ಚಂದದ ಕವನ ವೆಂಕಿ...
"ಕನಸ ಬಾಜಾರದ ತುದಿಯಲ್ಲಿ
ಸ್ಮಶಾನವೊಂದಿದೆ
ಮಾರಾಟವಾಗದೆ ಉಳಿದವಕ್ಕೆ
ಅಲ್ಲೆಲ್ಲ
ಸಮಾಧಿಯ ಧೂಳೊರೆಸಿ
ಬರೆದ ಸಾಲುಗಳನ್ನು ಓದುವಾಗೆಲ್ಲ
ಇಂಥ ಸಾಲುಗಳೇ ಇಲ್ಲದ
ನನ್ನ ಕನಸಿನ ನೆನಪಾಗುತ್ತದೆ"

ಈ ಸಾಲುಗಳು ತುಂಬಾ ಇಷ್ಟ ಆತು :) ಹಾಗೆ ಚಿತ್ರ ಬಿಡ್ಸಿದ್ದ, ಡಿಜಿಟಲ್ಲಿ ಕ್ರಿಯೇಟ್ ಮಾಡಿದ್ದ ?

venkat.bhats said...

ಮೂರ್ತಿ ಸರ್,ವಾಣಿ,ತೇಜಕ್ಕ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

ಶರತ್-ಇದು ಪೆನ್ನಲ್ಲಿ ಸ್ಕೆಚ್ ಮಾಡಿ ನಂತ್ರ ಫೋಟೊಶಾಪ್‍ನಲ್ಲಿ ಪೋಸ್ಟ್ ಪ್ರೊಸೆಸ್ಸಿಂಗ್(Emboss)ಮಾಡಿದ್ದು. thanks for comment too.

Soumya said...

Came here via 'ಮನದಹಾದಿ'. ಕೆಲವು ಹಳೆಯದ್ದನೂ ನೋಡಿದೆ. Very nice sketches. Best wishes

Ittigecement said...

ತುಂಬಾ ಸೊಗಸಾಗಿದೆ...

ಪ್ರತಿ ಸಾಲುಗಳೂ ಇಷ್ಟವಾಯಿತು...

Anonymous said...

ಕವನ ತುಂಬಾ ಚೆನ್ನಾಗಿದೆ ಮಾತ್ರವಲ್ಲ ಅದಕ್ಕೆ ಬಹಳ ಸೂಕ್ತವಾದ ಚಿತ್ರ. ನಿಮ್ಮ presentation skills ಅತ್ಯುತ್ತಮ.

venkat.bhats said...

ಸೌಮ್ಯ- ರೂಪಾಂತರಕ್ಕೆ ಸ್ವಾಗತ.Thanks,ಇತ್ತ ಇಣುಕಿದ್ದಕ್ಕೆ;ಇಷ್ಟಪಟ್ಟು ಕಮೆಂಟಿಸಿದ್ದಕ್ಕೆ ಹಾಗು ನಿಮ್ಮ creative groupಗೆ ಪರಿಚಯಿಸಿದ್ದಕ್ಕೆ.

ರವೀಂದ್ರ-ಧನ್ಯವಾದಗಳು.

ಪ್ರಕಾಶಣ್ಣ-Thanks,ಹೀಗೇ ಇರಲಿ ಪ್ರೀತಿ.

-ವೆಂ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ತುಂಬಾ ಸೊಗಸಾಗಿದೆ...

ಎಲ್ಲ ಸಾಲುಗಳೂ ಇಷ್ಟವಾಯಿತು...

ಕವನ ತುಂಬಾ ಚೆನ್ನಾಗಿದೆ.

ಸುಂದರವಾದ ಚಿತ್ರ ಕೂಡಾ..