04 November, 2010

ಮನದಲ್ಲಿ ಬೆಳಗಲಿ ಹಣತೆ


ಜಿಡ್ಡುಗಟ್ಟಿದ ಹಣತೆಗಳನೆಲ್ಲ
ತೊಳೆದುಬಿಡಿ
ಹಳೆಬಟ್ಟೆಗಳಿಂದ ಹೊಸೆದ ಬತ್ತಿ
ಹೊಚ್ಚ ಹೊಸ ದೀಪವಾಗಲಿ
ಹೊಸ ಬದುಕು ಬೆಳಗಲಿ

ಕನಸಿನ ನಕ್ಷತ್ರಕಡ್ಡಿ
ಹೊತ್ತಿಸುತ್ತ
ಪ್ರತಿ ಮಗುವೂ
ಮನೆಯ ಹಣತೆಯಾಗಲಿ
ಬೆಂಕಿ ಪೆಟ್ಟಿಗೆಯಲ್ಲಿನ ಕಡ್ಡಿಗಳೆಲ್ಲ
ಹಣತೆ ಹಚ್ಚುವುದಕ್ಕೆ ಸಾಕಾಗಲಿ
ಊರ ಸುಡುವ ಬೆಂಕಿ
ಎಲ್ಲೂ ಹತ್ತದಿರಲಿ

ಮನದ ಬಾಗಿಲಲಿ ಬೆಳಗಲಿ
ಆಕಾಶಬುಟ್ಟಿ
ತಿಮಿರವನೋಡಿಸಿ ಎಲ್ಲರನು ಕಾಯಲಿ 

ಹೊಟ್ಟೆ ಕಿಚ್ಚಿನ ಬೆಂಕಿ
ಕೋಮುದ್ವೇಷದ ಬೆಂಕಿ
ಪ್ರೀತಿಯ ಮಳೆಗೆ ನಂದಲಿ
ಹೊಸ್ತಿಲಲಿ ಉರಿಯಲಿ
ಹಣತೆ
ಮನೆ ಮನದಲ್ಲಿ ದೀಪಾವಳಿ

5 comments:

Shiv said...

ಸುಂದರವಾದ ಆಶಯಗಳು !
ನಿಮ್ಮ ಹಾರೈಕೆಗೆ ಸಹಮತವಿದೆ..

ದೀಪಾವಳಿ ಶುಭಾಶಯಗಳು !

ತೇಜಸ್ವಿನಿ ಹೆಗಡೆ said...

ಸುಂದರ ಹಾರೈಕೆಗಳನ್ನೊಳಗೊಂಡ ಕವನ. ಚೆನ್ನಾಗಿದೆ. ಕವನದ ಆಶಯದಂತೇ ಎಲ್ಲರ ಬದುಕೂ ಹಸನಾಗಲಿ. ದೀಪಾವಳಿ ಮನದ ಕತ್ತಲೆಯನ್ನೋಡಿಸಿ ಜ್ಞಾನ ದೀವಿಗೆಯ ಹೊತ್ತಿಸಲು ಸಹಕಾರಿಯಾಗಲ್.

ದೀಪಾವಳಿಯ ಹಾರ್ದಿಕ ಶುಭಾಶಯಗಳು.

ತೇಜಸ್ವಿನಿ ಹೆಗಡೆ said...

ನಿಮ್ಮ "ಮನದ ಗೋಡೆ, ಬಣ್ಣದ ಗರಿ, ಕುತೂಹಲ"- ಎಲ್ಲವೂ ತುಂಬಾ ಚೆನ್ನಾಗಿದೆ. ಅದರಲ್ಲೂ ಬಣ್ಣದ ಗರಿಯೊಳಗಿನ ಎಲ್ಲಾ ಚಿತ್ರಗಳೂ ತುಂಬಾ ಇಷ್ಟವಾದವು. U have a very good talent. Keep it up!

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ.ಬಹಳ ಇಷ್ಟವಾಯಿತು.ಸು೦ದರ ಆಶಯದ ಕವನವೂ ಚೆನ್ನಾಗಿದೆ. ಅಭಿನ೦ದನೆಗಳು.

Anju said...

Chennagide chennagide