15 November, 2010

ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು

ಚಿಟ್ಟೆಯ ರೆಕ್ಕೆ ಕಟ್ಟಿಕೊಂಡು ಹಾರಿದವಳು
ಕೊಳದ ಬಳಿ ತನ್ನಂತದ್ದೇ ಹುಡುಗಿಯರ ಕಂಡು ಕೆಳಗಿಳಿದಳು

ಹೆಸರೇನೆಂದು ಕೇಳಿದೆ
ಓ, ನನಗೆ ಹೆಸರೇ ಇಲ್ಲವೆಂದು ಜೋರಾಗಿ ನಕ್ಕಳು

ಜನ ನಿನ್ನ ಏನಂತ ಕರೀತಾರೆ
ಜನ ನನ್ನ ಹೆಸರಿಡಿದು ಕರೆಯುವುದೇ ಕಡಿಮೆ ಎಂದಳು

ಹೋಗಲಿ ನಾನು ನಿನ್ನ ಏನಂತ ಕರೆಯಲಿ
ನಿನಗಿಷ್ಟವಾದ ಹಾಗೆ, ಜನರೂ ಅವರಿಗಿಷ್ಟವಾದ ಹಾಗೇ ಕರೆಯುತ್ತಾರೆ

ನವಿಲುಗರಿ ತೋರಿಸುತ್ತೇನೆಂದು  ಕರೆದೊಯ್ದಳು
ಗರಿ ಮಾತ್ರ ಎಷ್ಟು ಹುಡುಕಿದರೂ ಸಿಗಲಿಲ್ಲ

ಮಳೆ ಎಂದರೆ ಇಷ್ಟವೆಂದವಳು
ಮಳೆಬರುವಾಗ ಯಾಕೋ ಜೋರಾಗಿ ಅಳುತ್ತಿದ್ದಳು

ಕಂಬಳಿಹುಳವೆ ಚಿಟ್ಟೆಯಾಗುತ್ತದೆ ಎಂದಾಗ
ಕತ್ತಲಲ್ಲಿ ಬಣ್ಣಗಳು ಕಾಣುವುದಿಲ್ಲವೆಂದೇನೇನೋ ಹೇಳುತ್ತಿದ್ದಳು

ಜಾಜಿ ಮಲ್ಲಿಗೆ, ದಾಸವಾಳ ಸಂಪಿಗೆ ಸೇವಂತಿಗೆಗಳ
ದಳಗಳಿಗಂಟಿದ ಕನಸ ಹರಡಿಕೊಂಡು ಕೂತಿದ್ದವಳು
ಇಂದು ಮಾತ್ರ ಸುಮ್ಮನೆ ಕೂತುಬಿಟ್ಟಿದ್ದಳು


3 comments:

ಚಿನ್ಮಯ ಭಟ್ said...

ಜಾಸ್ತಿ ಎನೂ ಅರ್ಥ ಆಗಲಿಲ್ಲ....
ಆದರೆ

"ಹೋಗಲಿ ನಾನು ನಿನ್ನ ಏನಂತ ಕರೆಯಲಿ
ನಿನಗಿಷ್ಟವಾದ ಹಾಗೆ, ಜನರೂ ಅವರಿಗಿಷ್ಟವಾದ ಹಾಗೇ ಕರೆಯುತ್ತಾರೆ"


ಸಾಲುಗಳು ಇಷ್ಟವಾದವು....
ಆ ಚಿತ್ರಕ್ಕಂತೂ ನೋಡಿದಷ್ಟು ಅರ್ಥಗಳು ಹೊಳೆಯುತ್ತಿದ್ದವು...
ಒಟ್ಟಿನಲ್ಲಿ ಮನದ ಮಸುಕಿನಲಿ,ಬಾವದ ಮಬ್ಬಿನಲಿ ಒಂದು ಕಾವ್ಯಪುಷ್ಪ ಅರಳಿತೇನೋ ಅನಿಸಿತು ಅಷ್ಟೆ!!!!!!!!!!!!!!!!!!!!!!!
.
ಬನ್ನಿ ನಮ್ಮನೆಗೂ
http://chinmaysbhat.blogspot.com

venkat.bhats said...

ಥ್ಯಾಂಕ್ಸ್ ಚಿನ್ಮಯ್, ಚಿತ್ರ ಬಿಡಿಸಿದ ನಂತರ ಹೀಗೆ ನೋಡುತ್ತಿದ್ದಾಗ ಕೆಲ ಸಾಲುಗಳು ಕಂಡಹಾಗೆನಿಸಿತು,ಏನೇನೋ ಹೊಸ ಅರ್ಥವಾದಂತೆನಿಸಿತು, ಹಾಗೇ ಇಳಿಸಿದ್ದು

ತೇಜಸ್ವಿನಿ ಹೆಗಡೆ said...

ಕವನ ಸ್ವಲ್ಪ ವಾಚ್ಯವಾಗಿದ್ದು, ಗೋಜಲೆನಿಸಿತು! ಚಿತ್ರ ಮಾತ್ರ ನೂರು ಮಾತು ಹೇಳಿತು.. :)