21 October, 2010

ನಮ್ಮೊಳಗಿನ ಬುದ್ಧಬುದ್ಧ ಯಾರಿಗೆ ಗೊತ್ತಿಲ್ಲ,
ಪುಟ್ಟ ಮಗುವೂ ಹೇಳುತ್ತದೆ-
ನಟ್ಟ ನಡುರಾತ್ರಿ ಎದ್ದುಹೋದನಂತೆ
ಬೋಧಿವೃಕ್ಷದಡಿ ಜ್ಞಾನವಾಯ್ತಂತೆ
ಬುದ್ಧನೆಂದರೆ ಶಾಂತಿ ಅಹಿಂಸೆ

ಕ್ರೌರ್ಯವೇ ಹೆಸರಾದವರು
ಜೀವ ವ್ಯಾಪಾರದವರು
ಹಣದಾಸೆಗೆ ಸಂತತೆಯ ಮರೆತವರೂ
ಹೇಳುತ್ತಾರೆ ಬುದ್ಧ ಗೊತ್ತೆಂದು
ಮತ್ಸರದ ಕಿಚ್ಚಂತ ಎದೆಯವರು
ಬಾಂಬಿನ ಭಾಷೆಯವರು
ಓಟಿನ ರಾಜಕೀಯದವರೂ
ಕ್ಲಬ್ಬು ಪಬ್ಬಲ್ಲೂ ಇಷ್ಟುದ್ದ
ಕೊರೆಯುತ್ತಾರೆ ಬುದ್ಧನ ಬಗ್ಗೆ,
ಕೇಳಿದರೆ ನಕ್ಕಾನು ಬುದ್ಧಬುದ್ಧನೆಂದರೆ ಇಷ್ಟೆ ಅಲ್ಲ,

ಕಣ್ತೆರೆದು ನೋಡಿಕೊಂಡರೆ
ಒಮ್ಮೆ ನಮ್ಮೊಳಗಿನ ಬೆಳಕ,
ಒಣಜೀವದೊಳಗೆ ಪ್ರೀತಿ ತುಂಬಿ,
ಹರಿಯಬಿಟ್ಟರೆ ಅದನು ಎದೆಯಿಂದ ಎದೆಗೆ,
ಎಚ್ಚರಾದರೆ ನಮ್ಮೊಳಗಿನ ಮಾನವ
ನಮ್ಮೊಳಗಿನ ನಿರಮ್ಮಳತೆಯಾಗಿ,
ನೆಮ್ಮದಿಯಾಗಿ ಇರುತ್ತಾನೆ.
ಜಗದಳುವಿಗ ಕಾರಣ ಕಂಡುಕೊಂಡವ
ನಮ್ಮವನೆ ಆಗುತ್ತಾನೆ.

ಮತ್ತು ಹೇಳಿಕೊಳ್ಳಬಹುದು
ಬುದ್ಧ ನಮಗೂ ಗೊತ್ತೆಂದು.

                                                                           ೨೦೦೮

( 07 ಸಪ್ಟೆಂಬರ್,2008ರ ಕರ್ಮವೀರದಲ್ಲಿ ಪ್ರಕಟಿತ )

5 comments:

ಚುಕ್ಕಿಚಿತ್ತಾರ said...

wow....!!
very nice poem and art.

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ ಕವಿತೆ. ನಮ್ಮೊಳಗಿನ ಬುದ್ಧನನ್ನು ಕಂಡದಿನ ನಮ್ಮೆಲ್ಲಾ ನೋವಿಗೆ ಮುಕ್ತಿಸಿಗುವುದು :)

ಉತ್ತಮ ಬ್ಲಾಗ್. ಸುಂದರ ಚಿತ್ರಗಳು.

Dr.D.T.krishna Murthy. said...

ಭಟ್ಟರೇ;ಅದ್ಭುತ ಕವನ,ಸುಂದರ ಚಿತ್ರ!ನಮಸ್ಕಾರ.

ಜಲನಯನ said...

ವೆಂಕಟ್..ನಿಜ,,,ಬುದ್ಧ-ಗಾಂಧಿ ಬಗ್ಗೆ ಮಾತನಾಡುವವರು ಇವರ ಉದಾತ್ತ ವಿಚಾರಗಳ ಅಣುವನ್ನೂ ಅರಿತವರಲ್ಲ...ಚನ್ನಾಗಿದೆ ಕವನಿಸಿದ ಶೈಲಿ...

ಗಿರಿ said...

wow... tumba isthavaaytu ee saalugalu...

ಬುದ್ಧನೆಂದರೆ ಇಷ್ಟೆ ಅಲ್ಲ,

ಕಣ್ತೆರೆದು ನೋಡಿಕೊಂಡರೆ
ಒಮ್ಮೆ ನಮ್ಮೊಳಗಿನ ಬೆಳಕ,
ಒಣಜೀವದೊಳಗೆ ಪ್ರೀತಿ ತುಂಬಿ,
ಹರಿಯಬಿಟ್ಟರೆ ಅದನು ಎದೆಯಿಂದ ಎದೆಗೆ,
ಎಚ್ಚರಾದರೆ ನಮ್ಮೊಳಗಿನ ಮಾನವ
ನಮ್ಮೊಳಗಿನ ನಿರಮ್ಮಳತೆಯಾಗಿ,
ನೆಮ್ಮದಿಯಾಗಿ ಇರುತ್ತಾನೆ.
ಜಗದಳುವಿಗ ಕಾರಣ ಕಂಡುಕೊಂಡವ
ನಮ್ಮವನೆ ಆಗುತ್ತಾನೆ.

Thanks
-giri