02 October, 2010

ನಿನ್ನ ಬಗ್ಗೆ




ನೂರು ಜನುಮದ ಒಲವು
ನಿನ್ನ ಕಣ್ಣೊಳಗೆ ತಂಗಿವೆ
          --  
ಎದೆಯ ಏರಿಳಿತದಲ್ಲಿ
ನಿನ್ನುಸಿರ ಪಿಸುಸದ್ದು
           --
ನಿನ್ನ ಕಣ್ಣ ಬೆಳಕಿಗೆ ಏಳುರಂಗು
ಅಲ್ಲಿ ಸಾವಿರ ತಾರೆಗಳ ಸಂತೆ
           --  
ತಿಳಿನೀರ ದಿಬ್ಬದಲಿ ನೀನೂ - ನಾನೂ
ದೋಣಿಗಳಿಗೆ ನೆನಪಿನ ಹೆಸರು
            --
ನೀನಿಟ್ಟ ಮುದ್ದು ಹೆಸರಿನ ಚುಕ್ಕಿಗಳೆಲ್ಲ
ನಿನ್ನ ಬರುವಿಗೇ ಕಾಯುತ್ತಿವೆ 
             --
ಮನದ ಮುಂದೆ ಕಾಣುವ ನಿನ್ನ ಮೋರೆಗೆ
ನನ್ನುಸಿರ ನೂರು ಗಜ್ಹಲುಗಳು ಹುಟ್ಟಿಕೊಳ್ಳುತ್ತವೆ
             --
ಹಾದಿ ಕಳಕೊಂಡ ಹಾತೆ ಕೂಡ ನಿನ್ನ ಕಂಡು
ನಕ್ಷತ್ರ ನೇಯಹೊರಡುತ್ತದೆ  
  


No comments: