02 October, 2010

ಹೇಳು

ನಿನ್ನ ಕಣ್ಣೊಳಗಿನ ಬೆಳಕಿಗೆ
ನನ್ನ ನೂರು ಕನಸುಗಳು ಚಿಗಿತು
ಮೊಗ್ಗು ದಳ- ದಳಗಳಾಗಿ ಅರಳಿವೆ

ನಿನ್ನ ಕಣ್ಣೊಳಗೆ ಹುದುಗಿ ಹೋಗಿದ್ದೇನೆ   
ಅದರೊಳಗಿನ ಬದುಕಿನ ಚಿತ್ತಾರ 
ಅಳೆಯಲಾಗದೆ ಕೂತಿದ್ದೇನೆ 
ಗೋಚರವ ಮರೆತಿದ್ದೇನೆ

ಕೊನೇಸಲ ಕೇಳುತ್ತಿದ್ದೇನೆ 

ನಿನ್ನ ಕಣ್ಣೊಳಗಿನ ಬೆಳಕಿನ  
ಬಣ್ಣ ಯಾವುದು ?

ಅರಿಯಲಾಗದೆ ಉಳಿದಿದ್ದೇನೆ,
ನೋಡುತಲೇ ಇರುತೇನೆ  
ಇಸವಿಗಳ ಲೆಕ್ಕ ಮರೆತು

No comments: