02 October, 2010

ಹೈಕುಗಳೆಂಬೊ ಹೈಕುಗಳು

ಹೈಕುಗಳೇ ಹೀಗೆ
ಕೈಗೆ ಸಿಕ್ಕೂ
ಸಿಕ್ಕದ  ಹಾಗೆ

ಹಸಿರಲ್ಲಿ ಅಡಗಿದ
ಹೂವಿನ ಕಂಪು
ತಂಗಾಳಿಯಲ್ಲಿ

ತಾನುರಿದು
ಬೆಳಗುವ ದೀಪ  
ಹಚ್ಚಿಬಿಡು

ಕತ್ತಲೆ
ಪುಟ್ಟ ಹಣತೆಗೆ
ಹೆದರಿದೆ 


ಭೂಮಿ ತುಂಬ
ನಕ್ಷತ್ರಗಳ ಬಿಂಬ 
ಅದೋ ಮಿಂಚುಹುಳ 

ಭೂಮಿಗೆ ಬಿದ್ದ
 ಶಾಪಗ್ರಸ್ಥ
ತಾರಿಕೆ

ಮಿಂಚು ಹುಳವೇ
ನನ್ನಲ್ಲೂ
ಬೆಳಕಿನ ಕನಸುಗಳಿವೆ

ಎಲ್ಲೋ
ಆಡುವ ಮಾತನ್ನು
ಕೇಳಲು
ಕಿವಿಗೆ ಮೊಬೈಲು

ಸಾಲೆಬಿಟ್ಟಿದ್ದೆ  ಹುಡುಗರು
ರಸ್ತೆಯಲ್ಲಿ ಗಾಡಿಗಳು
ಏನು ಓಡುತ್ತವೆ

ಏನಿರುತ್ತವೆ
ಪತ್ರಿಕೆಗಳಲ್ಲಿ
ಬರೀ ಸುದ್ದಿ

ಮೀನು ಹಿಡಿಯುವ
ಸಿದ್ಧಿಗೆ
ಮಿಂಚುಳ್ಳಿಯ ತಪಸ್ಸು
ಮರದ ಮೇಲೆ

ಕತ್ತಲಿಗೆ
ಹೆದರಿ ಕೂಗುತ್ತಿದೆ
ಜೀರುಂಡೆ

ಹತ್ತಾರು ಕಲ್ಲಿಗೆ
ಬಿದ್ದ
ಒಗರು ಹುಣಿಸೆ
ಏನು ರುಚಿ

ಪೀಠದ ತುಂಬಾ ಹೂವುಗಳು
ದೇವರಿಗೆ
ಉಸಿರಾಡಲೂ ಸ್ಥಳವಿಲ್ಲ

ನೀಲಿ ಹಸಿರು
ಹಳದಿ ಕೆಂಪು
ಬಣ್ಣ ಬಣ್ಣದ ಮೀನುಗಳು

ಹೂವೆ ಬರುತ್ತಿದೆ
ಗಾಳಿಯೊಂದಿಗೆ
ಕಂಪಿನಲಿ

ಗುಲ್ಮೊಹರ ಮರದಡಿ
ಅದರದೇ ಕೆಂಪು
ನೆರಳು

ಬಕುಲದ
ಹೂಬಿಟ್ಟಿದ್ದನ್ನು
ಪ್ರಚಾರ ಮಾಡುತ್ತಿದೆ ಗಾಳಿ

ತಾಸುಗಟ್ಟಲೆ
ಕಾದು
ಸೇರಬೇಕಾದ ಊರು
ಬಂದೇಬಿಟ್ಟಿತು

ಹೆಸರೇ ಗೊತ್ತಿಲ್ಲದ
 ಹಸಿರು ಗಿಡದಲ್ಲಿ
ನಗುವ ಹಳದಿ ಹೂ

ಅದೋ ಅಲ್ಲೊಂದು ಸಂಕ
ದಾಟಿಬಿಡಿ ಧೈರ್ಯ ಮಾಡಿ
ಮುಂದೆ ಊರು ನಿಮ್ಮದೇ

ರಾತ್ರಿ ನಕ್ಷತ್ರ
ತರಹೋದ ಹಾತೆ
ಇನ್ನೂ  ಬಂದಿಲ್ಲ ಮರಳಿ

ತೀರದಲ್ಲಿ
ತೀರದ ಅಲೆ
ಸುತ್ತು ಸುಳಿ


( ಹಾಯ್ ಬೆಂಗಳೂರ್‌ನಲ್ಲಿ ಪ್ರಕಟಿತ )

3 comments:

Unknown said...

Nice man... keep it Up

Dileep Hegde said...

ಅದ್ಭುತ ಚಿತ್ರಗಳು.. ಮನಕ್ಕೆ ಹತ್ತಿರವಾಗುವ ಹಾಯ್ಕುಗಳು.. ಮುಂದುವರೆಯಲಿ ನಿಮ್ಮ ಬ್ಲಾಗ್ ಯಾನ...

ಚಿನ್ಮಯ ಭಟ್ said...

ಅರ್ಧ ಮುಖದ ಚಿತ್ರಗಳು ಕಲ್ಪಿಸಿದಷ್ಟೂ ಅರ್ಥ ತೋರುತ್ತಿವೆ...ಸಕತ್ತಾಗಿದೆ...