02 October, 2010

ಮೂಕ ಮನಸು ಕಾಯತಾವ

 ಕಪ್ಪು ಮೋಡ ಮುಗಿಲಿನ್ಯಾಗ
ಸುಳಿದಾಡುತಾವ
ಹೊಯ್ದಾಡುತಾವ ಅತ್ತಿಂದಿತ್ತ
ಗುಡುಗುಡುಗುತಾವ, ಸಿಡುಸಿಡುಕುತಾವ

ಸಾವಿರ ನೆನಪು ಮನದೊಳಗ

ಯಾರೀಗೂ ಹೇಳಲಾರದಾಂಗ 
ಅಲೆದದ ಒಳಗೊಳಗ, ದಿಗಿಲು ಹೀಂಗ 

ಮೂಕ ಮನಸು ಕಾಯತಾವ
ಬೆಳಕು ಮಿಂಚಿ ಮಾಯತಾವ
ಕತ್ತಾಲ ಗೋಡೆಯೊಳಗ

ಸೋಗಿನೊಳಗ ಅಡಗುತಾವ
ಮಳೆಯ ಮೋಡ
ಎಲ್ಲೋ ಸೆಳೆದು ಹೊರಳುತಾವ

ದೂರ ದೂರ ನಿಲ್ಲದ್ಹಾಂಗ 

ನವಿಲ ಕುಣಿತ ಅರಸುತಾವ 
ಬರದ ಒಳಗೆ ಸಾಯುತಾವ 
ಒಂದು ಹನಿಯೂ
 ಹನಿಸುತಿಲ್ಲ 
ಮನದ ದುಗುಡ ನಿಲ್ಲುತ್ತಿಲ್ಲ

ತೇಲಿಹೋತ
ಆರಿಹೋತ 
 ಬಿದ್ದರೂ ಬೀಳಲಾರದ ಮಳೆ

ಅತ್ತರೂ ಅಳಲಾರದ ನನ್ನಹಾಂಗ  



(ಚಿತ್ರ: ಕಲಾವಿದ ಜಿ. ಕೆ. ಸತ್ಯರ ಚಿತ್ರವೊಂದರಿಂದ ಪ್ರೇರಿತ)

2 comments:

ಚುಕ್ಕಿಚಿತ್ತಾರ said...

sundaravaada chitragalu....!!!!

ಪ್ರಗತಿ ಹೆಗಡೆ said...

ಚೆನ್ನಾಗಿದೆ... ಚಿತ್ರ ನೀವೇ ಬಿದಿಸ್ಸಿದ್ದಾ ?